ಬುಧವಾರ, ಆಗಸ್ಟ್ 7, 2013

ನಾನ್ಯಾಕೆ ಲೂಸಿಯಾ ಪ್ರಿ-ಆರ್ಡರ್ ...........

ನಾನ್ಯಾಕೆ ಲೂಸಿಯಾ ಪ್ರಿ-ಆರ್ಡರ್ ಮಾಡುತ್ತಿಲ್ಲ ಅಂದ್ರೆ....ನಾನ್ಯಾವತ್ತು ಆನ್ಲೈನ್ ನಲ್ಲಿ ಸಿನಿಮಾ ನೋಡೆ ಇಲ್ಲ , ನಮ್ಮ ದೇಶದಲ್ಲ ಇಂಟರ್ನೆಟ್ ಬಾಳ ಸ್ಲೋ…ಆನ್ಲೈನ್ ಸಿನಿಮಾ ನೋಡಕ್ಕೆ ಆಗಲ್ಲ, ಸಿನಿಮಾನ ಥಿಯಟೆರ್ ನಲ್ಲಿ ನೋಡೊ ಮಜಾನೆ ಬೇರೆ…ಆನ್ಲೈನ್ ನಲ್ಲಿ ಆ ಗಮ್ಮತ್ತಿಲ್ಲ, ಸಿನಿಮಾ ರಿಲೀಸ್ ಆಗೋಕೆ ಮುಂಚೇನೆ ಆರ್ಡರ್ ಮಾಡೋಕೆ ಅದೇನು…………  ನ್ನಫಿಲ್ಮಾ ? , ಸಿನಿಮಾ ಹೇಗಿರತ್ತೋ ಗೊತ್ತಿಲ್ಲ !! ,  ಫಿಲ್ಮ್ ನಲ್ಲಿ ಯಾರು ಸೂಪರ್ ಸ್ಟಾರ್ಗಳು ಇಲ್ಲ. ಏನ್ ಗ್ಯಾರಂಟಿ ಚಿತ್ರ ಹಾಕಿದ್ದು ದುಡ್ಡು ಬರತ್ತೆ ಅಂತ ? ನನ್ನ ಹತ್ರ ಕ್ರೆಡಿಟ್ ಕಾರ್ಡ್ ಇಲ್ಲ ಆನ್ಲೈನ್ ಆರ್ಡರ್ ಮಾಡಕ್ಕೆ ? ನನಗೆ ಚಿತ್ರದ ಹಂಚಿಕೆದಾರನಾಗೋ ಷೋಕಿ ಇಲ್ಲಪ್ಪ. ನಾನೊಬ್ಬ ಸಾಮಾನ್ಯ ಪ್ರೇಕ್ಷಕ :) ,  ನಂಗ್ಯಾಕೊ ಈ ಮಾಡೆಲ್ ಉಳಿಯತ್ತೆ ಅನ್ನೋ ನಂಬಿಕೆ ಇಲ್ಲಪ್ಪ,  ನೀನೇನ್ ಗುರು ಪಕ್ಕ ಮಾರ್ಕೆಟಿಂಗ್ ವನ್ ಆಗ್ ಬಿಟ್ಟಿದ್ದಿಯಾ. ಆರ್ಡರ್ ಮಾಡದ್ರೆ ನಿನಗೋಸ್ಕರ ಅಂತ ಮಾಡ್ಬೇಕು ಅಷ್ಟೆ , ಇವತ್ತು ಸ್ವಲ್ಪ ಬ್ಯುಸಿ ಇದ್ದೆ. ಆರ್ಡರ್ ಮಾಡಕ್ಕೆ ಆಗಲಿಲ್ಲ ,  ಸುಮ್ಕೆ ಇರಪ್ಪ ಈ ಲೂಸಿಯಾದವರ “ತಿನ್ ಬೇಡ ಕಮ್ಮಿ , ತಿನ್ ಬೇಡ ಕಮ್ಮಿ”  ಹಾಡ್ಕೆಳ್ಕೊಂಡು  ನಾನ್ ಈ ಪಾಟಿ ದಪ್ಪ ಆಗ್ಬಿಟ್ಟೀವ್ನಿ…ಇನ್ನು ಪ್ರಿ-ಆರ್ಡರ್ ಮಾಡಿದ್ರೆ ಅಷ್ಟೆ ಕತೆ..!!!  ನಾನ್ ಸಿನಿಮಾ ನೋಡಿ ಎಷ್ಟೋ ವರುಷಾ ಆಯ್ತು. ಈಗ ಅದ್ರೆಲ್ಲೆಲ್ಲ ಇಂಟರೆಸ್ಟ್ ಇಲ್ಲ ಬಿಡಪ್ಪ , ರಿಲೀಸ್ ಆಗ್ಲಿ ಕಂಡಿತ ಥಿಯಟರ್ ನಲ್ಲಿ ಬಂದು ನೋಡ್ತೀನಿ , ನಮ್ಮ ಪಕ್ಕದ್ಮನೆ ಬೆಕ್ಕಿನ್ ಹೆಸರು ಕೂಡ ಲೂಸಿಯಾ, ನಂಗ ಅದ್ಕಂಡ್ರೆ ಆಗಲ್ಲ, ಸುಮ್ಮನೆ ಮಾತಾಡ್ತಾನೆ ಇದ್ದಾರೆ ಒಂದವರೆ ವರುಷದಿಂದ ರಿಲೀಸ್ ಮಾಡ್ತಾರಾ ನಿಜವಾಗಿ ? , ನನ್ ಲೈಫ್ ಅಲ್ಲೇ ದುಡ್ಡು ಕೊಟ್ಟು ಸಿನಿಮಾ ನೋಡಿದ್ದೆ ಇಲ್ಲ. ಏನಿದ್ರು ಫ್ರೀ-ಡೌನ್ಲೋಡ್ ಅಂಡ್ ವಾಚ್ !!, ಏನೆ ಆಗ್ಲಿ ಹಾಲಿವುಡ್ , ಬಾಲಿವುಡ್ ಮೂವೀಸ್ ಗೆ ಮ್ಯಾಚ್ ಮಾಡೋಕೆ ಆಗಲ್ಲ ಬಿಡಿ. ಅದ್ ಬಿಡಿ ಪಕ್ಕದ್ ರಾಜ್ಯದ್ ಮೂವೀಸ್ ಅಷ್ಟು ಮಾಡೋಕೆ ಆಗಲ್ಲ, ಏನಿದು ಲೂಸಿಯಾ ?!, ಸಿಕ್ಕಬಟ್ಟೆ ಹೈಪ್ ಆಗೋಯ್ತು…ಕೆಲ್ಸ ಮಾಡೋರ್ ಸದ್ದಿಲ್ಲದೆ ಕೆಲ್ಸ ಮಾಡ್ತಾರೆ, ದುಡ್ಡು ಕೊಟ್ಮೇಲೆ ಡೌನ್‍ಲೋಡ್ ಮಾಡ್ಕೊಳೊ ಆಪ್ಸನ್ ಇರಬೇಕಿತ್ತು ..ಬೇರೆ ಒಂದ್ಸಾರಿ ನೋಡಕ್ಕೆ ಯಾಕೆ ಆರ್ಡರ್ ಮಾಡಬೇಕಪ್ಪ ?
ಚಿತ್ರಕೃಪೆ : bengloortalkies.blogspot.com

ಇಷ್ಟೇನಾ ಇನ್ನು ಏನಾದ್ರೂ ಇದೆಯಾ ?  ಇನ್ನೊಂದ್ಸಾರಿ ಓದಿ ನೋಡಿ ಇನ್ನೊಂದು ಹತ್ತು ಕಾರಣ ಸಿಗಬಹುದು ಆರ್ಡರ್ ಮಾಡದೆ ಇರಕ್ಕೆ. ಸಾಕ್ ನಿಲ್ಸಿ ಎಷ್ಟು ಅಂತಾ ಬರೆ ಕಾರಣ ಹುಡುಕ್ತಾ ಕೂತಿರ್ತಿರಾ ? ಸ್ವಲ್ಪ ಮೈ ಜಡ್ಡು ಬಿಟ್ಟು ಬೆಂಬಲಕ್ಕೆ ನಿಲ್ಲಿ.  ಪವನ್ ಮತ್ತು ತಂಡದವರು ಇಂತಹ ಪ್ರಶ್ನೆಗಳ ಸುಳಿಯಿಂದ ಕನ್ನಡ ಚಿತ್ರರಂಗವನ್ನು ( ಆಗದಿದ್ದರೆ ಅಲ್ಲಿರುವ, ಅಲ್ಲಿಗೆ ಬರಲಿರುವ ಕೆಲವರನ್ನಾದರು ) ಮೇಲೆತ್ತುವ ಪ್ರಯತ್ನದಲ್ಲಿದ್ದಾರೆ. ಪ್ರತಿಭೆ ಮತ್ತು ಪ್ರಯತ್ನ ಎರಡು ಒಂದುಗೂಡಿದೆ ಇಲ್ಲಿ. ಅಂತಹ ಸಾಧ್ಯತೆ ಅಪರೂಪಕ್ಕೆ ಆಗುವಂತಹದ್ದು. ಕಲಾವಿದನೊಬ್ಬ ಮಾರಾಟಗಾರನು ಆಗಿದ್ದಾನೆ. ಚಿತ್ರದ ಬಿಡುಗಡೆಗಾಗಿ ಪ್ರಯತ್ನ ನಡೆಸ್ತಾ ಇದ್ದಾನೆ. ನಾವು ಮಾಡಬೇಕಿರುವುದು , ಮಾಡುವುದಕ್ಕೆ ಆಗುವುದಾದರು ಏನು ? ಇಂತಹದೊಂದು ಪ್ರಯತ್ನವನ್ನು ಹೆಚ್ಚಿನ ಜನಗಳ ಬಳಿಗೆ ತಲುಪಿಸುವುದು. ಅದಕ್ಕಾಗಿ ಪ್ರಿ-ಆರ್ಡರ್ ಮಾಡಿ. ನಾವು ಬಂಡವಾಳವಾಗಿ ಹಾಕುವ ದುಡ್ಡು ನಿಮಗೆ ಹಿಂತಿರುಗುವ ಎಲ್ಲ ಸಾದ್ಯತೆಗಳಂತು ಎದ್ದು ಕಾಣುತ್ತಿದೆ. ಚಿತ್ರದ ಬಗ್ಗೆ ಈಗಾಗಲೆ ಒಳ್ಳೆ ಅಬಿಪ್ರಾಯ ಕೇಳಿ ಬರುತ್ತಿದೆ, ಲಂಡನ್ ನಲ್ಲಿ ಪ್ರಶಸ್ತಿ ಗೆದ್ದಿದ್ದು ಆಯ್ತು . ಇನ್ನೇನು ದಾಖಲೆ ಬೇಕು ನಂಬಿಕೆ ಬರಲು.  ನೆನಪಿರಲಿ ನಿಮಗೆ ಜೀವಮಾನ ಪರ್ಯಂತ ಎರಡು ಚಿತ್ರದ ಆನ್‍ಲೈನ್ ಹಂಚಿಕೆಯ ಹಕ್ಕನ್ನು ಕೊಡುತ್ತಿದ್ದಾರೆ. ಹಾಗಾಗಿ ಕಳೆದು ಕೊಳ್ಳುವಂತದ್ದು ಏನು ಇಲ್ಲ, ಪಡೆದು ಕೊಳ್ಳಲು ಬಹಳ ಇದೆ. 

ಇದೇನಪ್ಪ ಅಷ್ಟೊಂದು ಪ್ರಶ್ನೆಗಳನ್ನ್ ಹಾಗೆ ಬಿಟ್ಟು ಮತ್ತೆ ಮತ್ತೆ ಪ್ರಿ-ಆರ್ಡರ್ ಮಾಡಿ , ಪ್ರಿ-ಆರ್ಡರ್ ಮಾಡಿ ಅಂತಿದ್ದಾನೆ ಅಂದ್ಕೊಂಡ್ರಾ !! ಅಲ್ಲಿರೊ ಪ್ರಶ್ನೆಗಳನ್ನ ಇನ್ನೊಂದ್ಸಾರಿ ಓದಿದ್ರೆ ನಿಮಗೆ ಗೊತ್ತಾಗತ್ತೆ ಅವೆಲ್ಲ ಕನ್ನಡ, ಕನ್ನಡ ಚಿತ್ರರಂಗದ ಬಗೆಗಿನ ಕೀಳಿರಮೆಯಿಂದ ಬಂದದ್ದು ಇಲ್ಲ ಏನನ್ನು ಮಾಡದೆ ಮಾತಾಡಿ ಬಾಯ್ ಚಟ ತೀರಿಸಿಕೊಳ್ಳುವ ರೂಡಿಯಿಂದ ಬಂದದ್ದು. ಅದಕ್ಕೆಂತಹ ಉತ್ತರವನ್ನು ಕೊಡುವುದು.ಬದಲಾವಣೆ ಬಯಸುವವರು ಬದಲಾವಣೆಯ ಭಾಗವಾಗಬಹುದಾದ ಒಂದು ಒಳ್ಳೆಯ ಅವಕಾಶವಿದೆ. ಬನ್ನಿ ಕೈ ಜೋಡಿಸಿ. ಇನ್ನು ಉಳಿದದ್ದು ಸಾದ್ಯಕ್ಕೆ ಉತ್ತರ ಕೊಡಲಿಕ್ಕಾಗದ ಮೂಲಭೂತ ಸೌಲಭ್ಯಗಳಿಗೆ ಸಂಬಂದಿಸಿದ್ದು ( ಸಾದ್ಯಕ್ಕೆ ಅದಕ್ಕೆ ನಾವು ನೀವು ಏನು ಮಾಡೋದಿಕ್ಕೆ ಆಗೋದಿಲ್ಲ ).  ಈ ಕಾರಣಗಳು ಒಳ್ಳೆಯ ಕೆಲಸವೊಂದಕ್ಕೆ ಬೆಂಬಲಿಸದೆ ಇರಲು ಕಾರಣವಾಗದಿರಲಿ ಅಂತ ಬಯಸ್ತೀನಿ. 

ನನ್ನದೆ ಒಂದು ಅನುಭವವನ್ನು ಹೇಳಬೇಕೆಂದ್ರೆ ನಾನು ಗಿರೀಶ್ ಕಾಸರವಳ್ಳಿಯವರ ಚಿತ್ರವೊಂದನ್ನು ನೋಡಲು ವಿಜಯನಗರದಿಂದ ಕೋರಮಂಗಲದವರೆಗೆ ವಾರದ ಮದ್ಯದಲ್ಲಿ ಹೋಗಿ ನೋಡಬೇಕಾಗಿತ್ತು. ಚಿತ್ರ ಬಿಡುಗಡೆ ಆಗಿದ್ದದ್ದು ಒಂದೆ ಒಂದು ಚಿತ್ರಮಂದಿರದಲ್ಲಿ ಒಂದು ಅಥವಾ ಎರಡು ಷೋ ಮಾತ್ರ. ಮುಂದಿನವಾರದವರೆಗೆ ಇರತ್ತೆ ಅನ್ನೋ ಬರವಸೇನು ಇರಲಿಲ್ಲ. ಚಿತ್ರ ರಾಷ್ಟ್ರಪ್ರಶಸ್ತಿ ಬಂದಿದ್ದ ಚಿತ್ರ. ಕಮರ್ಶಿಯಲಿ ಇಷ್ಟವಾಗದೆ ಇರುವಂತಹದ್ದು, ಮನೋರಂಜನೆ ಅನ್ನಿಸಿಕೊಳ್ಳದೆ ಬೋರ್ ಹೊಡೆಸುವಂತದ್ದು ಏನು ಇರಲಿಲ್ಲ. ಆದ್ರು ಈ ಗತಿ. ಅದೇ ಗತಿ ಮುಂದೆ ಕನ್ನಡದ ಚಿತ್ರಗಳಿಗೆ ಇಲ್ಲದೆ ಇರಲಿ ಅನಿಸಿದ್ರೆ ನಮ್ಕಡೆ ಇಂದ ಒಂದು ಪ್ರಯತ್ನ ಮಾಡೇ ಬಿಡೋಣ.

ಈಗಲಾದ್ರು ಆರ್ಡರ್ ಮಾಡಬೇಕು ಅನ್ನಿಸಿದ್ರೆ ನನ್ನ ಈ ಲಿಂಕನ್ನು ಬಳಸಿ ಆರ್ಡರ್ ಮಾಡಿ...ಯಾಕಂದ್ರೆ ನಾನು ಹಾಕಿದೆ ಬಂಡವಾಳದ ಮೇಲೆ ಬಂದ ದುಡ್ಡನ್ನು ಮತ್ತೊಂದು ಇಂತಹ ಪ್ರಯತ್ನಕ್ಕೆ ಬಳಸುವ ನಿರ್ದಾರ ಮಾಡಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ