ಸೋಮವಾರ, ಆಗಸ್ಟ್ 5, 2013

ಒಂದು (ವಿ)ಚಿತ್ರಕತೆ

ಲೂಸಿಯಾದ್ದು ಒಂದು ವಿ.ಚಿತ್ರಕತೆ. ಏನಪ್ಪಾ ನಾನ್ಯಾವಾಗ ಚಿತ್ರ ನೋಡಿದೆ ಅಂದ್ಕೊಂಡ್ರಾ ? ಇಲ್ಲ ನಾನಿನ್ನು ಚಿತ್ರ ನೋಡಿಲ್ಲ.
 
ಪವನ್ ಕುಮಾರ್ ಚಿತ್ರಕತೆ ಹಿಡಿದು ಕೊಂಡು ಪರದಾಡಿದಾಗಿನಿಂದ, ಚಿತ್ರರೆಡಿಯಾಗಿ ವಿದೇಶದಲ್ಲಿ ಪ್ರದರ್ಶನಗೊಂಡು ವೀಕ್ಷಕರ ಮೆಚ್ಚಿನ ಸಿನೆಮಾ ಎಂಬ ಹೆಗ್ಗಳಿಕೆಯನ್ನು ಪಡೆದಾಗಿನವರೆಗಿನ ಚಿತ್ರದ ವಿಚಿತ್ರಕತೆಯ ಬಗ್ಗೆ ಹೇಳುತ್ತಿದ್ದೇನೆ.  ಮೊದ ಮೊದಲು "ಮೇಕಿಂಗ್ ಎನಿಮೀಸ್" ಅಂತ ಪವನ್ ಬರೆದ ಬರಹವೊಂದನ್ನು ಓದಿ ಇದು ಕೂಡ ಚಿತ್ರರಂಗದವರ ಮತ್ತೊಂದು ಗಿಮಿಕ ಇರಬಹುದು ಎಂದುಕೊಂಡರು, ಇರಲಿ ನೋಡೋಣ ಅಂದುಕೊಂಡು ಪವನ್ ಬರಹಗಳ ಮೇಲೆ ಒಂದು ಕಣ್ಣಿಟ್ಟಿದ್ದೆ. ನೋಡು ನೋಡುತ್ತಿದ್ದೆ ಪವನ್ ತನ್ನ ಕನಸುಗಳನ್ನು ಕನ್ನಡ ಪ್ರೇಕ್ಷಕರಿಗೆ ಮಾರೆಬಿಟ್ಟರು. ೫೦-೬೦ ಜನರ ನಿರ್ಮಿಸುತ್ತಿರುವ ಕನ್ನಡದ ಮೊದಲ ಚಿತ್ರದ ನಿರ್ಮಾಪಕರಾಗಿಬಿಟ್ಟರು. ನಿರ್ಮಾಪಕರಾದ ಎಲ್ಲರಿಗು ಚಿತ್ರದ ಕತೆ ಗೊತ್ತಿತ್ತು ಅಥವಾ ಪವನ್ ಹೇಳಿದ್ದರು ಎಂದರೆ ಕಂಡಿತ ನನಗೆ ನಂಬಲಿಕ್ಕೆ ಅಸಾಧ್ಯ. ಅದು ಹೇಗೆ ಸಾಧ್ಯವಾಯಿತು ? ತಾವು ಬಂಡವಾಳ ಹಾಕುತ್ತಿರುವ ಚಿತ್ರದ ಕತೆ ಏನು ಅಂತಾ ಗೊತ್ತಿಲ್ಲದೆ ಅವರೆಲ್ಲ ದುಡ್ಡು ಹಾಕಿದರಾ ? ಗೊತ್ತಿಲ್ಲ !! ಹಾಗೆ ಬಂಡವಾಳ ಹಾಕಿದ್ದರೆ ಪವನ್ ಮಾಡಿದ್ದ ಮೋಡಿಯಾದರು ಏನು ? ಅಂತಹ ಗಟ್ಟಿಯಾದ ನಂಬಿಕೆಯೊಂದರ ಬುನಾದಿ ಯಾವುದು ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳೊಂದಿಗೆ ಲೂಸಿಯಾ ಚಿತ್ರದ ಬಗ್ಗೆ ಪವನ್ ಬರೆಯುತ್ತಿದ್ದ ಬರಹಗಳನ್ನು ಓದುತ್ತಲೆ ಇದ್ದೆ. ಏನಾಗಬಹುದು ಅಂತ ನೋಡುವ ಕುತೂಹಲವಷ್ಟೇ ಅದು.


ತಿನ್ ಬೇಡ ಕಮಿ ತಿನ್ ಬೇಡ ಕಮಿ ಅನ್ನೊ ಹಾಡೊ ಬಿಡುಗಡೆಯಾಗಿದ್ದ ತಡ ಪವನ್ ಮತ್ತು ಲೂಸಿಯಾವನ್ನು ನಾನು ನೋಡುತ್ತಿದ್ದ ರೀತಿಯೇ ಬದಲಾಗಿ ಹೋಯಿತು. ಅಲ್ಲಿಂದಾಚೆಗೆ ಲೂಸಿಯಾದ ಪ್ರತಿಯೊಂದು ಬೆಳೆವಣಿಗೆಯನ್ನು ಅತಿಯಾದ ಕಾಳಜಿಯಿಂದ ನೋಡತೊಡಗಿದೆ. ಹೇಳುತ್ತಾ ಹೋದರೆ ಹೇಳುವುದು ಬಹಳಷ್ಟಿದೆ. ಹೇಳಲೆಬೇಕಾದ ಮತ್ತು ಮೆಚ್ಚಬೇಕಾದ ವಿಚಾರ ಅಂದ್ರೆ ಪವನ್ ಫೇಸ್‍ಬುಕ್ ಮತ್ತು ಮಿಕ್ಕಿತರೆ ಆನ್‍ಲೈನ್ ಮಾದ್ಯಮಗಳ ಮೂಲಕ ಜನರನ್ನು ಸತತವಾಗಿ ಹಿಡಿದಿಟ್ಟ ಬಗೆ. ಅದನ್ನು ಗಮನಿಸುತ್ತ ಬಂದವರಿಗೆ ಪವನ್ ಕುಮಾರ್ ನ ಚಿತ್ರದ ಕತೆ ಹೇಳುವ ಬಗ್ಗೆ ಯಾವುದೇ ಅನುಮಾನ ಇರಬಾರದು ಅಂದ್ಕೋತಿನಿ :).  ಪವನ್ ಗಾಳಿಪಟವನ್ನು ಹಾರಿಸುವ ನುರಿತ ಪಟುವಿನಂತೆ ಅಗತ್ಯ ಇದ್ದಾಗ ಸಡಿಲ ಬಿಟ್ಟು , ಬೇಕೆಂದ ಕೂಡಲೆ ಹಿಡಿತ ಬಿಗಿಗೊಳಿಸುತ್ತಿದ್ದದ್ದು ನಿಜಕ್ಕೂ ಅದ್ಬುತ. 

ಇಷ್ಟೆಲ್ಲ ಆದ್ರೂ ಪವನ್ ಲೂಸಿಯಾ ಚಿತ್ರವನ್ನು ಮುಂಗಡ ಕಾದಿರಿಸಿ ಅಂದಾಗ ನಾನು ಮುಂದಾಗಲಿಲ್ಲ. ಆಗಬೇಕೊ ಬೇಡವೊ ಅಂತ ಅಡ್ಡಗೋಡೆಯ ಮೇಲೆ ಕೂತಿದ್ದ ನಾನು ಕೊನೆಗೆ ಮನಸು ಮಾಡಿ ಮುಂಗಡ ಕಾದಿರಿಸಿ ಬಿಟ್ಟೆ. ನಿಜಕ್ಕು ನಾನು ಹಾಗೆ ಮಾಡಿದ್ದು ಚಿತ್ರ ಚೆನ್ನಾಗಿರತ್ತೆ ಅನ್ನೋ ಯಾವುದೇ ಬರವಸೆಯ ಮೇಲು ಅಲ್ಲ.  ಒಳ್ಳೆಯ ಚಿತ್ರವೊಂದನ್ನು ಮಾಡುವ ಪ್ರಯತ್ನಕ್ಕೆ ಬೆಂಬಲವಿರಲಿ ಅನ್ನೋ ಉದ್ದೇಶದಿಂದ. ಈಗ ಚಿತ್ರದ ಮೊದಲ ಪ್ರದರ್ಶನ ಮುಗಿದಿದೆ, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ನನಗು ನನ್ನ ನಿರ್ಧಾರದ ಬಗ್ಗೆ ಸಂತಸವಾಗುತ್ತಿದೆ. ಈಗಲಾದ್ರು ಅಡ್ದಗೋಡೆಯ ಮೇಲೆ ಕೂತು ನೋಡುತ್ತಿರುವ ನನ್ನ ಸ್ನೇಹಿತರು ಚಿತ್ರವನ್ನು ಮುಂಗಡ ಕಾದಿರಿಸಿ ಚಿತ್ರದ ಬಿಡುಗಡೆಗೆ ಬೆಂಬಲಿಸಬೇಕು ಅಂತ ಅಂದ್ಕೊತೀನಿ. ಎಲ್ಲಕ್ಕಿಂತ ಹೆಚ್ಚಾಗಿ ಈಗ ಬೆಂಬಲ ಕೊಡದಿದ್ದರೆ ಮುಂದೆ ಯಾರು ಈ ರೀತಿಯ ಬದಲಾವಣೆಯ ಗಾಳಿಪಟವನ್ನು ಹಾರಿಸುವುದೆ ಇಲ್ಲವೋ ಅನ್ನೋ ಭಯಕೂಡ ಆಗತ್ತೆ. ಹಾಗಾಗಿ ತಪ್ಪದೆ ಮುಂಗಡ ಕಾದಿರಿಸಿ. ಬದಲಾವಣೆಯ ಗಾಳಿಪಟ ಗಿರಕಿ ಹೊಡೆಯದಿರಲಿ.

ಮುಂಗಡ ಕಾದಿರಿಸಲು ನೀವು ಈ ಕೊಂಡಿಯನ್ನು ಬಳಸಬಹುದು.
http://muvi.es/w3254/114086

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ