ಶನಿವಾರ, ಆಗಸ್ಟ್ 24, 2013

ಇಲ್ಲಿದೆ ನೋಡಿ ಈ ವರ್ಷದ ಹಿಟ್ ಚಿತ್ರಗಳಲ್ಲಿ ಒಂದಾದ "ಸಿಂಪಲ್ಲಾಗ್ ಒಂದು ಲವ್ ಸ್ಟೋರಿ". ನೋಡಿ ಆನಂದಿಸಿ



http://muvi.es/w4787/114086

ಬುಧವಾರ, ಆಗಸ್ಟ್ 7, 2013

ನಾನ್ಯಾಕೆ ಲೂಸಿಯಾ ಪ್ರಿ-ಆರ್ಡರ್ ...........

ನಾನ್ಯಾಕೆ ಲೂಸಿಯಾ ಪ್ರಿ-ಆರ್ಡರ್ ಮಾಡುತ್ತಿಲ್ಲ ಅಂದ್ರೆ....ನಾನ್ಯಾವತ್ತು ಆನ್ಲೈನ್ ನಲ್ಲಿ ಸಿನಿಮಾ ನೋಡೆ ಇಲ್ಲ , ನಮ್ಮ ದೇಶದಲ್ಲ ಇಂಟರ್ನೆಟ್ ಬಾಳ ಸ್ಲೋ…ಆನ್ಲೈನ್ ಸಿನಿಮಾ ನೋಡಕ್ಕೆ ಆಗಲ್ಲ, ಸಿನಿಮಾನ ಥಿಯಟೆರ್ ನಲ್ಲಿ ನೋಡೊ ಮಜಾನೆ ಬೇರೆ…ಆನ್ಲೈನ್ ನಲ್ಲಿ ಆ ಗಮ್ಮತ್ತಿಲ್ಲ, ಸಿನಿಮಾ ರಿಲೀಸ್ ಆಗೋಕೆ ಮುಂಚೇನೆ ಆರ್ಡರ್ ಮಾಡೋಕೆ ಅದೇನು…………  ನ್ನಫಿಲ್ಮಾ ? , ಸಿನಿಮಾ ಹೇಗಿರತ್ತೋ ಗೊತ್ತಿಲ್ಲ !! ,  ಫಿಲ್ಮ್ ನಲ್ಲಿ ಯಾರು ಸೂಪರ್ ಸ್ಟಾರ್ಗಳು ಇಲ್ಲ. ಏನ್ ಗ್ಯಾರಂಟಿ ಚಿತ್ರ ಹಾಕಿದ್ದು ದುಡ್ಡು ಬರತ್ತೆ ಅಂತ ? ನನ್ನ ಹತ್ರ ಕ್ರೆಡಿಟ್ ಕಾರ್ಡ್ ಇಲ್ಲ ಆನ್ಲೈನ್ ಆರ್ಡರ್ ಮಾಡಕ್ಕೆ ? ನನಗೆ ಚಿತ್ರದ ಹಂಚಿಕೆದಾರನಾಗೋ ಷೋಕಿ ಇಲ್ಲಪ್ಪ. ನಾನೊಬ್ಬ ಸಾಮಾನ್ಯ ಪ್ರೇಕ್ಷಕ :) ,  ನಂಗ್ಯಾಕೊ ಈ ಮಾಡೆಲ್ ಉಳಿಯತ್ತೆ ಅನ್ನೋ ನಂಬಿಕೆ ಇಲ್ಲಪ್ಪ,  ನೀನೇನ್ ಗುರು ಪಕ್ಕ ಮಾರ್ಕೆಟಿಂಗ್ ವನ್ ಆಗ್ ಬಿಟ್ಟಿದ್ದಿಯಾ. ಆರ್ಡರ್ ಮಾಡದ್ರೆ ನಿನಗೋಸ್ಕರ ಅಂತ ಮಾಡ್ಬೇಕು ಅಷ್ಟೆ , ಇವತ್ತು ಸ್ವಲ್ಪ ಬ್ಯುಸಿ ಇದ್ದೆ. ಆರ್ಡರ್ ಮಾಡಕ್ಕೆ ಆಗಲಿಲ್ಲ ,  ಸುಮ್ಕೆ ಇರಪ್ಪ ಈ ಲೂಸಿಯಾದವರ “ತಿನ್ ಬೇಡ ಕಮ್ಮಿ , ತಿನ್ ಬೇಡ ಕಮ್ಮಿ”  ಹಾಡ್ಕೆಳ್ಕೊಂಡು  ನಾನ್ ಈ ಪಾಟಿ ದಪ್ಪ ಆಗ್ಬಿಟ್ಟೀವ್ನಿ…ಇನ್ನು ಪ್ರಿ-ಆರ್ಡರ್ ಮಾಡಿದ್ರೆ ಅಷ್ಟೆ ಕತೆ..!!!  ನಾನ್ ಸಿನಿಮಾ ನೋಡಿ ಎಷ್ಟೋ ವರುಷಾ ಆಯ್ತು. ಈಗ ಅದ್ರೆಲ್ಲೆಲ್ಲ ಇಂಟರೆಸ್ಟ್ ಇಲ್ಲ ಬಿಡಪ್ಪ , ರಿಲೀಸ್ ಆಗ್ಲಿ ಕಂಡಿತ ಥಿಯಟರ್ ನಲ್ಲಿ ಬಂದು ನೋಡ್ತೀನಿ , ನಮ್ಮ ಪಕ್ಕದ್ಮನೆ ಬೆಕ್ಕಿನ್ ಹೆಸರು ಕೂಡ ಲೂಸಿಯಾ, ನಂಗ ಅದ್ಕಂಡ್ರೆ ಆಗಲ್ಲ, ಸುಮ್ಮನೆ ಮಾತಾಡ್ತಾನೆ ಇದ್ದಾರೆ ಒಂದವರೆ ವರುಷದಿಂದ ರಿಲೀಸ್ ಮಾಡ್ತಾರಾ ನಿಜವಾಗಿ ? , ನನ್ ಲೈಫ್ ಅಲ್ಲೇ ದುಡ್ಡು ಕೊಟ್ಟು ಸಿನಿಮಾ ನೋಡಿದ್ದೆ ಇಲ್ಲ. ಏನಿದ್ರು ಫ್ರೀ-ಡೌನ್ಲೋಡ್ ಅಂಡ್ ವಾಚ್ !!, ಏನೆ ಆಗ್ಲಿ ಹಾಲಿವುಡ್ , ಬಾಲಿವುಡ್ ಮೂವೀಸ್ ಗೆ ಮ್ಯಾಚ್ ಮಾಡೋಕೆ ಆಗಲ್ಲ ಬಿಡಿ. ಅದ್ ಬಿಡಿ ಪಕ್ಕದ್ ರಾಜ್ಯದ್ ಮೂವೀಸ್ ಅಷ್ಟು ಮಾಡೋಕೆ ಆಗಲ್ಲ, ಏನಿದು ಲೂಸಿಯಾ ?!, ಸಿಕ್ಕಬಟ್ಟೆ ಹೈಪ್ ಆಗೋಯ್ತು…ಕೆಲ್ಸ ಮಾಡೋರ್ ಸದ್ದಿಲ್ಲದೆ ಕೆಲ್ಸ ಮಾಡ್ತಾರೆ, ದುಡ್ಡು ಕೊಟ್ಮೇಲೆ ಡೌನ್‍ಲೋಡ್ ಮಾಡ್ಕೊಳೊ ಆಪ್ಸನ್ ಇರಬೇಕಿತ್ತು ..ಬೇರೆ ಒಂದ್ಸಾರಿ ನೋಡಕ್ಕೆ ಯಾಕೆ ಆರ್ಡರ್ ಮಾಡಬೇಕಪ್ಪ ?
ಚಿತ್ರಕೃಪೆ : bengloortalkies.blogspot.com

ಇಷ್ಟೇನಾ ಇನ್ನು ಏನಾದ್ರೂ ಇದೆಯಾ ?  ಇನ್ನೊಂದ್ಸಾರಿ ಓದಿ ನೋಡಿ ಇನ್ನೊಂದು ಹತ್ತು ಕಾರಣ ಸಿಗಬಹುದು ಆರ್ಡರ್ ಮಾಡದೆ ಇರಕ್ಕೆ. ಸಾಕ್ ನಿಲ್ಸಿ ಎಷ್ಟು ಅಂತಾ ಬರೆ ಕಾರಣ ಹುಡುಕ್ತಾ ಕೂತಿರ್ತಿರಾ ? ಸ್ವಲ್ಪ ಮೈ ಜಡ್ಡು ಬಿಟ್ಟು ಬೆಂಬಲಕ್ಕೆ ನಿಲ್ಲಿ.  ಪವನ್ ಮತ್ತು ತಂಡದವರು ಇಂತಹ ಪ್ರಶ್ನೆಗಳ ಸುಳಿಯಿಂದ ಕನ್ನಡ ಚಿತ್ರರಂಗವನ್ನು ( ಆಗದಿದ್ದರೆ ಅಲ್ಲಿರುವ, ಅಲ್ಲಿಗೆ ಬರಲಿರುವ ಕೆಲವರನ್ನಾದರು ) ಮೇಲೆತ್ತುವ ಪ್ರಯತ್ನದಲ್ಲಿದ್ದಾರೆ. ಪ್ರತಿಭೆ ಮತ್ತು ಪ್ರಯತ್ನ ಎರಡು ಒಂದುಗೂಡಿದೆ ಇಲ್ಲಿ. ಅಂತಹ ಸಾಧ್ಯತೆ ಅಪರೂಪಕ್ಕೆ ಆಗುವಂತಹದ್ದು. ಕಲಾವಿದನೊಬ್ಬ ಮಾರಾಟಗಾರನು ಆಗಿದ್ದಾನೆ. ಚಿತ್ರದ ಬಿಡುಗಡೆಗಾಗಿ ಪ್ರಯತ್ನ ನಡೆಸ್ತಾ ಇದ್ದಾನೆ. ನಾವು ಮಾಡಬೇಕಿರುವುದು , ಮಾಡುವುದಕ್ಕೆ ಆಗುವುದಾದರು ಏನು ? ಇಂತಹದೊಂದು ಪ್ರಯತ್ನವನ್ನು ಹೆಚ್ಚಿನ ಜನಗಳ ಬಳಿಗೆ ತಲುಪಿಸುವುದು. ಅದಕ್ಕಾಗಿ ಪ್ರಿ-ಆರ್ಡರ್ ಮಾಡಿ. ನಾವು ಬಂಡವಾಳವಾಗಿ ಹಾಕುವ ದುಡ್ಡು ನಿಮಗೆ ಹಿಂತಿರುಗುವ ಎಲ್ಲ ಸಾದ್ಯತೆಗಳಂತು ಎದ್ದು ಕಾಣುತ್ತಿದೆ. ಚಿತ್ರದ ಬಗ್ಗೆ ಈಗಾಗಲೆ ಒಳ್ಳೆ ಅಬಿಪ್ರಾಯ ಕೇಳಿ ಬರುತ್ತಿದೆ, ಲಂಡನ್ ನಲ್ಲಿ ಪ್ರಶಸ್ತಿ ಗೆದ್ದಿದ್ದು ಆಯ್ತು . ಇನ್ನೇನು ದಾಖಲೆ ಬೇಕು ನಂಬಿಕೆ ಬರಲು.  ನೆನಪಿರಲಿ ನಿಮಗೆ ಜೀವಮಾನ ಪರ್ಯಂತ ಎರಡು ಚಿತ್ರದ ಆನ್‍ಲೈನ್ ಹಂಚಿಕೆಯ ಹಕ್ಕನ್ನು ಕೊಡುತ್ತಿದ್ದಾರೆ. ಹಾಗಾಗಿ ಕಳೆದು ಕೊಳ್ಳುವಂತದ್ದು ಏನು ಇಲ್ಲ, ಪಡೆದು ಕೊಳ್ಳಲು ಬಹಳ ಇದೆ. 

ಇದೇನಪ್ಪ ಅಷ್ಟೊಂದು ಪ್ರಶ್ನೆಗಳನ್ನ್ ಹಾಗೆ ಬಿಟ್ಟು ಮತ್ತೆ ಮತ್ತೆ ಪ್ರಿ-ಆರ್ಡರ್ ಮಾಡಿ , ಪ್ರಿ-ಆರ್ಡರ್ ಮಾಡಿ ಅಂತಿದ್ದಾನೆ ಅಂದ್ಕೊಂಡ್ರಾ !! ಅಲ್ಲಿರೊ ಪ್ರಶ್ನೆಗಳನ್ನ ಇನ್ನೊಂದ್ಸಾರಿ ಓದಿದ್ರೆ ನಿಮಗೆ ಗೊತ್ತಾಗತ್ತೆ ಅವೆಲ್ಲ ಕನ್ನಡ, ಕನ್ನಡ ಚಿತ್ರರಂಗದ ಬಗೆಗಿನ ಕೀಳಿರಮೆಯಿಂದ ಬಂದದ್ದು ಇಲ್ಲ ಏನನ್ನು ಮಾಡದೆ ಮಾತಾಡಿ ಬಾಯ್ ಚಟ ತೀರಿಸಿಕೊಳ್ಳುವ ರೂಡಿಯಿಂದ ಬಂದದ್ದು. ಅದಕ್ಕೆಂತಹ ಉತ್ತರವನ್ನು ಕೊಡುವುದು.ಬದಲಾವಣೆ ಬಯಸುವವರು ಬದಲಾವಣೆಯ ಭಾಗವಾಗಬಹುದಾದ ಒಂದು ಒಳ್ಳೆಯ ಅವಕಾಶವಿದೆ. ಬನ್ನಿ ಕೈ ಜೋಡಿಸಿ. ಇನ್ನು ಉಳಿದದ್ದು ಸಾದ್ಯಕ್ಕೆ ಉತ್ತರ ಕೊಡಲಿಕ್ಕಾಗದ ಮೂಲಭೂತ ಸೌಲಭ್ಯಗಳಿಗೆ ಸಂಬಂದಿಸಿದ್ದು ( ಸಾದ್ಯಕ್ಕೆ ಅದಕ್ಕೆ ನಾವು ನೀವು ಏನು ಮಾಡೋದಿಕ್ಕೆ ಆಗೋದಿಲ್ಲ ).  ಈ ಕಾರಣಗಳು ಒಳ್ಳೆಯ ಕೆಲಸವೊಂದಕ್ಕೆ ಬೆಂಬಲಿಸದೆ ಇರಲು ಕಾರಣವಾಗದಿರಲಿ ಅಂತ ಬಯಸ್ತೀನಿ. 

ನನ್ನದೆ ಒಂದು ಅನುಭವವನ್ನು ಹೇಳಬೇಕೆಂದ್ರೆ ನಾನು ಗಿರೀಶ್ ಕಾಸರವಳ್ಳಿಯವರ ಚಿತ್ರವೊಂದನ್ನು ನೋಡಲು ವಿಜಯನಗರದಿಂದ ಕೋರಮಂಗಲದವರೆಗೆ ವಾರದ ಮದ್ಯದಲ್ಲಿ ಹೋಗಿ ನೋಡಬೇಕಾಗಿತ್ತು. ಚಿತ್ರ ಬಿಡುಗಡೆ ಆಗಿದ್ದದ್ದು ಒಂದೆ ಒಂದು ಚಿತ್ರಮಂದಿರದಲ್ಲಿ ಒಂದು ಅಥವಾ ಎರಡು ಷೋ ಮಾತ್ರ. ಮುಂದಿನವಾರದವರೆಗೆ ಇರತ್ತೆ ಅನ್ನೋ ಬರವಸೇನು ಇರಲಿಲ್ಲ. ಚಿತ್ರ ರಾಷ್ಟ್ರಪ್ರಶಸ್ತಿ ಬಂದಿದ್ದ ಚಿತ್ರ. ಕಮರ್ಶಿಯಲಿ ಇಷ್ಟವಾಗದೆ ಇರುವಂತಹದ್ದು, ಮನೋರಂಜನೆ ಅನ್ನಿಸಿಕೊಳ್ಳದೆ ಬೋರ್ ಹೊಡೆಸುವಂತದ್ದು ಏನು ಇರಲಿಲ್ಲ. ಆದ್ರು ಈ ಗತಿ. ಅದೇ ಗತಿ ಮುಂದೆ ಕನ್ನಡದ ಚಿತ್ರಗಳಿಗೆ ಇಲ್ಲದೆ ಇರಲಿ ಅನಿಸಿದ್ರೆ ನಮ್ಕಡೆ ಇಂದ ಒಂದು ಪ್ರಯತ್ನ ಮಾಡೇ ಬಿಡೋಣ.

ಈಗಲಾದ್ರು ಆರ್ಡರ್ ಮಾಡಬೇಕು ಅನ್ನಿಸಿದ್ರೆ ನನ್ನ ಈ ಲಿಂಕನ್ನು ಬಳಸಿ ಆರ್ಡರ್ ಮಾಡಿ...ಯಾಕಂದ್ರೆ ನಾನು ಹಾಕಿದೆ ಬಂಡವಾಳದ ಮೇಲೆ ಬಂದ ದುಡ್ಡನ್ನು ಮತ್ತೊಂದು ಇಂತಹ ಪ್ರಯತ್ನಕ್ಕೆ ಬಳಸುವ ನಿರ್ದಾರ ಮಾಡಿದ್ದೇನೆ.

ಸೋಮವಾರ, ಆಗಸ್ಟ್ 5, 2013

ಒಂದು (ವಿ)ಚಿತ್ರಕತೆ

ಲೂಸಿಯಾದ್ದು ಒಂದು ವಿ.ಚಿತ್ರಕತೆ. ಏನಪ್ಪಾ ನಾನ್ಯಾವಾಗ ಚಿತ್ರ ನೋಡಿದೆ ಅಂದ್ಕೊಂಡ್ರಾ ? ಇಲ್ಲ ನಾನಿನ್ನು ಚಿತ್ರ ನೋಡಿಲ್ಲ.
 
ಪವನ್ ಕುಮಾರ್ ಚಿತ್ರಕತೆ ಹಿಡಿದು ಕೊಂಡು ಪರದಾಡಿದಾಗಿನಿಂದ, ಚಿತ್ರರೆಡಿಯಾಗಿ ವಿದೇಶದಲ್ಲಿ ಪ್ರದರ್ಶನಗೊಂಡು ವೀಕ್ಷಕರ ಮೆಚ್ಚಿನ ಸಿನೆಮಾ ಎಂಬ ಹೆಗ್ಗಳಿಕೆಯನ್ನು ಪಡೆದಾಗಿನವರೆಗಿನ ಚಿತ್ರದ ವಿಚಿತ್ರಕತೆಯ ಬಗ್ಗೆ ಹೇಳುತ್ತಿದ್ದೇನೆ.  ಮೊದ ಮೊದಲು "ಮೇಕಿಂಗ್ ಎನಿಮೀಸ್" ಅಂತ ಪವನ್ ಬರೆದ ಬರಹವೊಂದನ್ನು ಓದಿ ಇದು ಕೂಡ ಚಿತ್ರರಂಗದವರ ಮತ್ತೊಂದು ಗಿಮಿಕ ಇರಬಹುದು ಎಂದುಕೊಂಡರು, ಇರಲಿ ನೋಡೋಣ ಅಂದುಕೊಂಡು ಪವನ್ ಬರಹಗಳ ಮೇಲೆ ಒಂದು ಕಣ್ಣಿಟ್ಟಿದ್ದೆ. ನೋಡು ನೋಡುತ್ತಿದ್ದೆ ಪವನ್ ತನ್ನ ಕನಸುಗಳನ್ನು ಕನ್ನಡ ಪ್ರೇಕ್ಷಕರಿಗೆ ಮಾರೆಬಿಟ್ಟರು. ೫೦-೬೦ ಜನರ ನಿರ್ಮಿಸುತ್ತಿರುವ ಕನ್ನಡದ ಮೊದಲ ಚಿತ್ರದ ನಿರ್ಮಾಪಕರಾಗಿಬಿಟ್ಟರು. ನಿರ್ಮಾಪಕರಾದ ಎಲ್ಲರಿಗು ಚಿತ್ರದ ಕತೆ ಗೊತ್ತಿತ್ತು ಅಥವಾ ಪವನ್ ಹೇಳಿದ್ದರು ಎಂದರೆ ಕಂಡಿತ ನನಗೆ ನಂಬಲಿಕ್ಕೆ ಅಸಾಧ್ಯ. ಅದು ಹೇಗೆ ಸಾಧ್ಯವಾಯಿತು ? ತಾವು ಬಂಡವಾಳ ಹಾಕುತ್ತಿರುವ ಚಿತ್ರದ ಕತೆ ಏನು ಅಂತಾ ಗೊತ್ತಿಲ್ಲದೆ ಅವರೆಲ್ಲ ದುಡ್ಡು ಹಾಕಿದರಾ ? ಗೊತ್ತಿಲ್ಲ !! ಹಾಗೆ ಬಂಡವಾಳ ಹಾಕಿದ್ದರೆ ಪವನ್ ಮಾಡಿದ್ದ ಮೋಡಿಯಾದರು ಏನು ? ಅಂತಹ ಗಟ್ಟಿಯಾದ ನಂಬಿಕೆಯೊಂದರ ಬುನಾದಿ ಯಾವುದು ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳೊಂದಿಗೆ ಲೂಸಿಯಾ ಚಿತ್ರದ ಬಗ್ಗೆ ಪವನ್ ಬರೆಯುತ್ತಿದ್ದ ಬರಹಗಳನ್ನು ಓದುತ್ತಲೆ ಇದ್ದೆ. ಏನಾಗಬಹುದು ಅಂತ ನೋಡುವ ಕುತೂಹಲವಷ್ಟೇ ಅದು.


ತಿನ್ ಬೇಡ ಕಮಿ ತಿನ್ ಬೇಡ ಕಮಿ ಅನ್ನೊ ಹಾಡೊ ಬಿಡುಗಡೆಯಾಗಿದ್ದ ತಡ ಪವನ್ ಮತ್ತು ಲೂಸಿಯಾವನ್ನು ನಾನು ನೋಡುತ್ತಿದ್ದ ರೀತಿಯೇ ಬದಲಾಗಿ ಹೋಯಿತು. ಅಲ್ಲಿಂದಾಚೆಗೆ ಲೂಸಿಯಾದ ಪ್ರತಿಯೊಂದು ಬೆಳೆವಣಿಗೆಯನ್ನು ಅತಿಯಾದ ಕಾಳಜಿಯಿಂದ ನೋಡತೊಡಗಿದೆ. ಹೇಳುತ್ತಾ ಹೋದರೆ ಹೇಳುವುದು ಬಹಳಷ್ಟಿದೆ. ಹೇಳಲೆಬೇಕಾದ ಮತ್ತು ಮೆಚ್ಚಬೇಕಾದ ವಿಚಾರ ಅಂದ್ರೆ ಪವನ್ ಫೇಸ್‍ಬುಕ್ ಮತ್ತು ಮಿಕ್ಕಿತರೆ ಆನ್‍ಲೈನ್ ಮಾದ್ಯಮಗಳ ಮೂಲಕ ಜನರನ್ನು ಸತತವಾಗಿ ಹಿಡಿದಿಟ್ಟ ಬಗೆ. ಅದನ್ನು ಗಮನಿಸುತ್ತ ಬಂದವರಿಗೆ ಪವನ್ ಕುಮಾರ್ ನ ಚಿತ್ರದ ಕತೆ ಹೇಳುವ ಬಗ್ಗೆ ಯಾವುದೇ ಅನುಮಾನ ಇರಬಾರದು ಅಂದ್ಕೋತಿನಿ :).  ಪವನ್ ಗಾಳಿಪಟವನ್ನು ಹಾರಿಸುವ ನುರಿತ ಪಟುವಿನಂತೆ ಅಗತ್ಯ ಇದ್ದಾಗ ಸಡಿಲ ಬಿಟ್ಟು , ಬೇಕೆಂದ ಕೂಡಲೆ ಹಿಡಿತ ಬಿಗಿಗೊಳಿಸುತ್ತಿದ್ದದ್ದು ನಿಜಕ್ಕೂ ಅದ್ಬುತ. 

ಇಷ್ಟೆಲ್ಲ ಆದ್ರೂ ಪವನ್ ಲೂಸಿಯಾ ಚಿತ್ರವನ್ನು ಮುಂಗಡ ಕಾದಿರಿಸಿ ಅಂದಾಗ ನಾನು ಮುಂದಾಗಲಿಲ್ಲ. ಆಗಬೇಕೊ ಬೇಡವೊ ಅಂತ ಅಡ್ಡಗೋಡೆಯ ಮೇಲೆ ಕೂತಿದ್ದ ನಾನು ಕೊನೆಗೆ ಮನಸು ಮಾಡಿ ಮುಂಗಡ ಕಾದಿರಿಸಿ ಬಿಟ್ಟೆ. ನಿಜಕ್ಕು ನಾನು ಹಾಗೆ ಮಾಡಿದ್ದು ಚಿತ್ರ ಚೆನ್ನಾಗಿರತ್ತೆ ಅನ್ನೋ ಯಾವುದೇ ಬರವಸೆಯ ಮೇಲು ಅಲ್ಲ.  ಒಳ್ಳೆಯ ಚಿತ್ರವೊಂದನ್ನು ಮಾಡುವ ಪ್ರಯತ್ನಕ್ಕೆ ಬೆಂಬಲವಿರಲಿ ಅನ್ನೋ ಉದ್ದೇಶದಿಂದ. ಈಗ ಚಿತ್ರದ ಮೊದಲ ಪ್ರದರ್ಶನ ಮುಗಿದಿದೆ, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ನನಗು ನನ್ನ ನಿರ್ಧಾರದ ಬಗ್ಗೆ ಸಂತಸವಾಗುತ್ತಿದೆ. ಈಗಲಾದ್ರು ಅಡ್ದಗೋಡೆಯ ಮೇಲೆ ಕೂತು ನೋಡುತ್ತಿರುವ ನನ್ನ ಸ್ನೇಹಿತರು ಚಿತ್ರವನ್ನು ಮುಂಗಡ ಕಾದಿರಿಸಿ ಚಿತ್ರದ ಬಿಡುಗಡೆಗೆ ಬೆಂಬಲಿಸಬೇಕು ಅಂತ ಅಂದ್ಕೊತೀನಿ. ಎಲ್ಲಕ್ಕಿಂತ ಹೆಚ್ಚಾಗಿ ಈಗ ಬೆಂಬಲ ಕೊಡದಿದ್ದರೆ ಮುಂದೆ ಯಾರು ಈ ರೀತಿಯ ಬದಲಾವಣೆಯ ಗಾಳಿಪಟವನ್ನು ಹಾರಿಸುವುದೆ ಇಲ್ಲವೋ ಅನ್ನೋ ಭಯಕೂಡ ಆಗತ್ತೆ. ಹಾಗಾಗಿ ತಪ್ಪದೆ ಮುಂಗಡ ಕಾದಿರಿಸಿ. ಬದಲಾವಣೆಯ ಗಾಳಿಪಟ ಗಿರಕಿ ಹೊಡೆಯದಿರಲಿ.

ಮುಂಗಡ ಕಾದಿರಿಸಲು ನೀವು ಈ ಕೊಂಡಿಯನ್ನು ಬಳಸಬಹುದು.
http://muvi.es/w3254/114086

ಶನಿವಾರ, ಆಗಸ್ಟ್ 3, 2013

ಲೂಸಿಯಾ...

ಏನಿದು ಲೂಸಿಯಾ ಅಂತೀರಾ ? ಲೂಸಿಯಾ ಸದ್ಯದಲ್ಲೆ ಬಿಡುಗಡೆಯಾಗಲಿರುವ ಕನ್ನಡ ಚಲನಚಿತ್ರ ...ಅಷ್ಟೆ ಆಗಿದ್ದರೆ ಕಂಡಿತವಾಗಿ ನನ್ನ ಬ್ಲಾಗ್‍ನಲ್ಲಿ ಒಂದು ಪುಟವನ್ನು ಇದಕ್ಕಾಗಿ ಹುಟ್ಟುಹಾಕುತ್ತಿರಲಿಲ್ಲ. ಲೂಸಿಯಾ...ಕನ್ನಡ ಚಿತ್ರರಂಗಕ್ಕೊಂದು ಬರವಸೆ, ಕನ್ನಡದ್ದೆ ನೆಲದ ಪ್ರತಿಬೆಗಳಿಗೊಂದು ಅವಕಾಶ, ................, ಒಂದು ಹೋರಾಟ. ಹೌದು, ಕನಸೊಂದನ್ನು ನನಸಾಗಿಸುವ ಹೋರಾಟ ! 
ಇದು ಪವನ್ ಕುಮಾರ್ ಒಬ್ಬರ ಕನಸಲ್ಲ. ಕನ್ನಡ ಚಲನಚಿತ್ರದ ಕುರಿತು ಕೊಂಡ ಹಲವರ ಕನಸು. ಇದು ಬರೇ ಕನಸಷ್ಟೆ ಅಲ್ಲ. ಕನಸನ್ನು ನನಸಾಗಿಸಿಕೊಳ್ಳಬಹುದಾದ ಒಂದು ಪಯಣದ ಆರಂಬ.
ಲೂಸಿಯಾವನ್ನು ಮುಂಗಡವಾಗಿ ಕಾಯ್ದಿರಿಸುವ ಮೂಲಕ ಕನ್ನಡದ ಕನಸುಗಳನ್ನು ಕಾಪಾಡಿಕೊಳ್ಳೋಣ, ಹೊಸ ಹಾದಿಯೊಂದನ್ನು ಕಟ್ಟಿಕೊಳ್ಳುವಲ್ಲಿ ನೀವು ಕೈ ಜೋಡಿಸಿದಂತಾಗುತ್ತದೆ. ಮುಂಗಡ ಕಾಯ್ದಿರಿಸಲು ಈ ಕೊಂಡಿಯನ್ನು ಬಳಸಿಕೊಳ್ಳಿ.
ಲೂಸಿಯಾ 
ನೀವು ಮುಂಗಡ ಕಾಯ್ದಿರಿಸಿದರೆ ನಿಮಗೆ ಲೂಸಿಯಾ ಮತ್ತು ಲೈಫು ಇಷ್ಟೇನೆ ಚಿತ್ರದ ಹಂಚಿಕೆಯ ಹಕ್ಕು ಸಿಗುವುದು. ಲೂಸಿಯಾ ಚಲನಚಿತ್ರ ಹೇಗಿರತ್ತೊ ಗೊತ್ತಿಲ್ಲ ? ನಾನ್ಯಾಕೆ ದುಡ್ಡು ಹಾಕೋದು ಅಂದ್ಕೊ ಬೇಡಿ ( ಈಗಾಗಲೆ ಬಂದಿರುವ ಚಿತ್ರದ ಕುರಿತ ವಿಮರ್ಶೆಗಳನ್ನು ಓದಿದರೆ ಈ ಪ್ರಶ್ನೆಯೆ ಬರೋಲ್ಲ).  ನೀವು ಕೂಡ ಹಂಚಿಕೆದಾರರ ಹಕ್ಕನ್ನು ಹೊಂದಿರುವುದರಿಂದ ನಿಮಗೆ ನಿಮ್ಮ ಹಣ ಹಿಂದಕ್ಕೆ ಬರುವ ಅವಕಾಶಗಳು ಹೆಚ್ಚಾಗೆ ಇದೆ ( ನನ್ನ ಬಂಡವಾಳ ವಾಪಸ್ ಬಂದಾಗಿದೆ, ಇನ್ನೇನಿದ್ದರು ಲಾಬ ಬರಬೇಕಷ್ಟೆ :-)). 

ಇನ್ಯಾಕೆ ತಡ ಆಗಸ್ಟ ಹದಿನೈದರ ಮುಂಚೆ ಮುಂಗಡ ಕಾಯ್ದಿರಿಸಿ, ನೀವು ಹಂಚಿಕೆದಾರರಾಗಿ .


ಇನ್ನು ಹೆಚ್ಚಿನ ವಿವರಗಳು http://www.hometalkies.com/lucia/  ನಲ್ಲಿವೆ.